ಒಂದೊಂದು ಮಾತನ್ನೂ ಅರ್ಥೈಸಿದ ನೀನು ಮೌನವನೇಕೆ ಅರಿಯದೆ ಹೋದೆ
ಮನದ ಮೂಲೆ ಮೂಲೆಯ ಇಣುಕಿದ ನೀನು ಭಾವವನೇಕೆ ಕಾಣದವನಾದೆ
ತುಂಬಿದ ಕಂಗಳ ದಿಟ್ಟಿಸಿದ ನೀನು ಕಂಬನಿಯನೇಕೆ ನೋಡದೆ ಹೋದೆ
ಪ್ರತಿ ಉಸಿರುಸಿರ ಅರಿತ ನೀನು ನಿಟ್ಟುಸಿರನೇಕೆ ಗಮನಿಸದೆ ಹೋದೆ
ಹೃದಯದ ಕಣಕಣದಲಿ ಬೆರೆತ ನೀನು ಕರಗುವುದನೇಕೆ ಮರೆತು ಹೋದೆ
ಪರಿಪರಿಯ ನೋವನು ನುಂಗಿದ ನೀನು ಸಿಹಿಯಾದ ಪ್ರೀತಿಯನೇಕೆ ಸಹಿಸದವನಾದೆ!
-- ಸವಿ ಸವಿತಾ/-

No comments:
Post a Comment