About Me!

My photo
A crazy poet, a creative writer, an occasional blogger, a dreamy dancer to the rhythms of Bharatanatyam, a passionate 'Art of Living' trainer with a penchant for Meditation, a perpetual learner of Sanskrit, a hobby graphologist, a boring Software professional .... I am all that life has ever thrown at me so lovingly and continues to!

ಸಂತೃಪ್ತಿ

ನಿನ್ನ ಮೋಹಕ ರೂಪವ ಕಂಡ ಈ ಕಂಗಳಿಗೆ ಇನ್ನೇನೂ ಕಾಣುವ ಆಸೆಯಿರದು,
ನಿನ್ನ ದಿವ್ಯ ಚರಣಕಂಜಗಳ ಸೇವೆಗೈದ ಈ ಹಸ್ತಗಳಿಗೆ ಇನ್ನೇನೂ ಸಾಧಿಸುವ ಬಯಕೆಯಿರದು,
ನಿನ್ನ ಅಮೃತ ಪಥದಲ್ಲಿ  ಹೆಜ್ಜೆಯಿಟ್ಟ ಈ ಪಾದಗಳಿಗೆ ಇನ್ನೆಲ್ಲೂ ಸಾಗುವ ಅಪೇಕ್ಷೆಯಿರದು,
ನಿನ್ನ ಪ್ರೇಮದ ಪರಾಕಾಷ್ಠೆಯಲ್ಲಿ ಮಿಡಿಯುತ್ತಿರುವ ಈ ಹೃದಯಕೆ ಇನ್ನಾವ ಪ್ರೀತಿಯ ಒಲವಿರದು,
ನಿನ್ನ ಪರಮಾನುಗ್ರಹದಲ್ಲಿ ಕ್ಷಣ ಕ್ಷಣವೂ ಮೀಯುತ್ತಿರುವ ಈ ತೃಣಜೀವಕೆ ಬದುಕಿನ ಇನ್ನಾವ ಹಂಗೂ ಇರದು !
     
  -- ಸವಿ ಸವಿತಾ/-

2 comments: